ಭಟ್ಕಳ, ಡಿಸೆಂಬರ್ 27: ಶಬರಿಮಲೈ ಪ್ರವಾಸ ಮುಗಿಸಿ ಗೋವಾದೆಡೆಗೆ ತೆರಳುತ್ತಿದ್ದ ವಾಹನ ರಾಷ್ರ್‍ಈಯ ಹೆದ್ದಾರಿಯಲ್ಲಿ ಅನಂತವಾಡಿ ಬಳಿ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಮರಿಗೆ ಬಿದ್ದ ಪರಿಣಾಮವಾಗಿ ಒರ್ವರು ಸಾವಿಗೀಡಾಗಿ ಇನ್ನೋರ್ವರಿಗೆ ಗಂಭೀರರೂಪದ ಗಾಯಗಳಾಗಿವೆ.


ಗಾಯಗೊಂಡ ವ್ಯಕ್ತಿಯನ್ನು ಮುರ್ಡೇಶ್ವರದ ಆಸ್ಪತ್ರೆಗೆ ಸೇರಿಸಲಾಗಿದ್ದು ಪರಿಸ್ಥಿತಿ ಚಿಂತಾಜನಕವಾಗಿದೆ. ಕಾರಿನ ಮುಂಭಾಗದಲ್ಲಿದ್ದ ಇನ್ನೋರ್ವ ಪ್ರಯಾಣಿಕ ಪವಾಡಸದೃಶನಾಗಿ ಪಾರಾಗಿದ್ದಾನೆ.
ಅಪಘಾತದಿಂದ ತೀವ್ರ ಆಘಾತಕ್ಕೊಳಗಾದ ವ್ಯಕ್ತಿ ಮಾತನಾಡಲೂ ಯಾವುದೇ ಪ್ರತಿಕ್ರಿಯೆ ತೋರಲು ಅಸಮರ್ಥನಾದುದರಿಂದ ಮೃತ ವ್ಯಕ್ತಿಯ ಅಥವಾ ತೀವ್ರವಾಗಿ ಗಾಯಗೊಂಡಿರುವ ಚಾಲಕನ ಬಗ್ಗೆ ಯಾವುದೇ ಮಾಹಿತಿ ದೊರಕಿಲ್ಲ.